ತಾವೇ ತೊಟ್ಟ ಸಂಕೋಲೆಯಲ್ಲಿ ಮನಮೋಹನಸಿಂಗ್

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಅಧೀನರ ಕೃತ್ಯಾಕೃತ್ಯಗಳಿಗೆ ಅಂತಿಮವಾಗಿನೇರ ಹೊಣೆಗಾರಿಕೆ ಇರುವುದು ಅತ್ಯುನ್ನತ ಪದಾಧಿಷ್ಠಿತರಿಗೇ ಎಂಬುದುಅಂಗೀಕೃತ ತತ್ತ್ವ. ಅಧರ್ಮವನ್ನು ನಿವಾರಿಸುವುದೂ ತಡೆಗಟ್ಟುವುದೂ ಕೂಡಾ ಅಧಿಕಾರಸ್ಥಾನದ ಪ್ರಾಥಮಿಕ ಹೊಣೆಗಾರಿಕೆಯೇ. ಈ ಆಧಾರತತ್ತ್ವದ ಅನನುಸರಣೆಯೇ ಈಗ ಮನಮೋಹನಸಿಂಗ್‌ರವರನ್ನು ಆಪಾದಿತನ ಸ್ಥಾನದಲ್ಲಿ ನಿಲ್ಲಿಸಿರುವುದು. ಬಿರ್ಲಾ ಒಡೆತನದ ಹಿಂಡಾಲ್ಕೋ ಸಂಸ್ಥೆಗೆ ನಿಯಮಬಾಹಿರವಾಗಿ ಕಲ್ಲಿದ್ದಲ ಗಣಿಗಾರಿಕೆಯ ಪರವಾನಗಿಯನ್ನು ನೀಡಲಾಗಿದ್ದುದು ಮನಮೋಹನಸಿಂಗ್ ಯಾಜಮಾನ್ಯದಲ್ಲಿ ಎಂಬ ಆಪಾದನೆ ದೀರ್ಘಕಾಲದಿಂದ ಇದ್ದದ್ದೇ. ಈ ಅವ್ಯವಹಾರದ ವಿವರಗಳು ಜನಜನಿತವೇ ಆಗಿದ್ದುದರಿಂದ ಮನಮೋಹನಸಿಂಗ್‌ರವರನ್ನು ರಾಜಕೀಯೋದ್ದೇಶದಿಂದ ಅಪರಾಧಿಯನ್ನಾಗಿಸಲಾಗಿದೆ ಎಂಬ ಸೋನಿಯಾಗಾಂಧಿ ಬಣದ ಧೋರಣೆಯಲ್ಲಿ ಹುರುಳಿಲ್ಲವೆಂಬುದು ಮೇಲ್ನೋಟಕ್ಕೇ ಎದ್ದುಕಾಣುತ್ತದೆ. ಒಂದು … Continue reading ತಾವೇ ತೊಟ್ಟ ಸಂಕೋಲೆಯಲ್ಲಿ ಮನಮೋಹನಸಿಂಗ್